ಅ ಮತ್ತು ಆ, ಇ ಮತ್ತು ಈ, ಉ ಮತ್ತು ಊ - ಇವುಗಳಿಗೆ 'ಸವರ್ಣ'ಗಳೆಂದು ಹೆಸರು. ಇವುಗಳಲ್ಲಿ ಆ,ಈ ಮತ್ತು ಊ ಸ್ವರಗಳು ದೀರ್ಘ ಸ್ವರಗಳು. ಸಂಸ್ಕೃತ ಪದಗಳು ಸಂಧಿಯಾಗುವ ಸಂದರ್ಭದಲ್ಲಿ, ಸವರ್ಣ ಸ್ವರಗಳು ಒಂದರ ಮುಂದೊಂದು ಬಂದಾಗ ಸಂಧಿ ಹೊಂದಿ, ಈ ಸವರ್ಣದ ದೀರ್ಘ ಸ್ವರವಾಗಿ ಉಳಿಯುತ್ತದೆ. ಸಂಸ್ಕೃತದಲ್ಲಿ ಪಾಣಿನೀಯ ಸೂತ್ರ : 'ಅಕಃ ಸವರ್ಣೇ ದೀರ್ಘಃ' ಎಂದು. ಉದಾಹರಣೆಗೆ: ಅ + ಅ ಸ್ವರಗಳು ಸಂಧಿಯಾಗಿ 'ಆ' ಎಂಬ ದೀರ್ಘ ಸ್ವರವಾಗಿ ಉಳಿಯುತ್ತದೆ. ಇ + ಇ ಸ್ವರಗಳು ಸಂಧಿಯಾಗಿ 'ಈ' ಎಂಬ ದೀರ್ಘ ಸ್ವರವಾಗಿ ಉಳಿಯುತ್ತದೆ. ಉ + ಉ ಸ್ವರಗಳು ಸಂಧಿಯಾಗಿ 'ಊ' ಎಂಬ ದೀರ್ಘ ಸ್ವರವಾಗಿ ಉಳಿಯುತ್ತದೆ. ಆ + ಅ ಸ್ವರಗಳು ಸಂಧಿಯಾಗಿ 'ಆ' ಎಂಬ ದೀರ್ಘ ಸ್ವರವಾಗಿ ಉಳಿಯುತ್ತದೆ. ಇ + ಈ ಸ್ವರಗಳು ಸಂಧಿಯಾಗಿ 'ಈ' ಎಂಬ ದೀರ್ಘ ಸ್ವರವಾಗಿ ಉಳಿಯುತ್ತದೆ. ಊ + ಉ ಸ್ವರಗಳು ಸಂಧಿಯಾಗಿ 'ಊ' ಎಂಬ ದೀರ್ಘ ಸ್ವರವಾಗಿ ಉಳಿಯುತ್ತದೆ. ಉದಾಹರಣೆಗಳು: == ಇವನ್ನೂ ನೋಡಿ == ಸಂಧಿ